

8th May 2025

ಕಲ್ಬುರ್ಗಿ..ದಲಿತ ಸಂಘರ್ಷ ಸಮಿತಿ ವತಿಯಿಂದ
ವಿಶ್ವವಿದ್ಯಾಲಯಕ್ಕೆ ಉನ್ನತ ಶಿಕ್ಷಣ ಗುಣಮಟ್ಟ ಹೆಚ್ಚಿಸುವುದು ಹಾಗೂ ಮೂಲ ಸೌಕರ್ಯಗಳಿಂದ ಬಳಲುತ್ತಿರುವ, ಬೋಧಕ ಸಿಬ್ಬಂದಿಯ ಕೊರತೆಯ ಬಗ್ಗೆ ಗಮನ ಹರಿಸದೇ ವಿಶ್ವವಿದ್ಯಾಲಯಕ್ಕೆ ಸೇರಿದ 250 ಎಕರೆ ಜಮೀನು ಲಪಟಾಯಿಸಲು ಹೊಂಚು ಹಾಕುತ್ತಿರುವ ಸರಕಾರದ ಕ್ರಮವನ್ನು ದಲಿತ ಸಂಘರ್ಷ ಸಮಿತಿ ಉಗ್ರವಾಗಿ ಖಂಡಿಸುತ್ತದೆ.
ಸ್ಪೋರ್ಟಸಿಟಿ ಹಾಗೂ ಸ್ಪೋರ್ಟ ಹಬ್ ಮತ್ತು ಇತರೆ ಸರಕಾರದ ಕಟ್ಟಡಗಳಿಗೆ ಸುಮಾರು 70 ಎಕರೆ ಜಮೀನು ಕೊಡಲು ವಿಶ್ವವಿದ್ಯಾಲಯ ಆಡಳಿತ ಮಂಡಳಿಗೆ ಸರಕಾರದ ಹಿರಿಯ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ.
ಜಿಲ್ಲೆಯ ಕೆಲವು ಪ್ರಭಾವಿ ವ್ಯಕ್ತಿಗಳು, ಜನಪ್ರತಿನಿಧಿಗಳು ಮತ್ತು ಸಿಂಡಿಕೇಟ್ ಸದಸ್ಯರು ಕೂಡಾ ವಿಶ್ವವಿದ್ಯಾಲಯ ಜಮೀನು ಎನ್.ಓ.ಸಿಗೆ ಒತ್ತಾಯ ಮಾಡುತ್ತಿರುವುದು ತೀರಾ ನಾಚೆಗೇಡಿಭಿಷಯವಾಗಿದೆ. ವಿಶ್ವವಿದ್ಯಾಲಯದ ಶಿಕ್ಷಣದಗುಣಮಟ್ಟ ಮತ್ತು ಅಭಿವೃದ್ಧಿ ಪರವಾಗಿರಬೇಕು ಹೊರತಾಗಿ ವಿಶ್ವವಿದ್ಯಾಲಯದ ಆಸ್ತಿಗೆ ಕನ್ನ ಹಾಕುವ ಕೆಲಸ ಸಿಂಡಿಕೇಟ್ ಸದಸ್ಯರು ಮಾಡಬಾರದು.
ವಿಶ್ವವಿದ್ಯಾಲಯ 800 ಎಕರೆ ಜಮೀನಿನಲ್ಲಿ ಈಗಾಗಲೇ 50 ಎಕರೆ ಇಎಸ್ಐ ಆಸ್ಪತ್ರೆಗೆ ಪಂಡಿತ ದೀನ ದಯಾಳ ಉಪಾಧ್ಯಾಯ ವಸತಿ ನಿಲಯ ಹಾಗೂ ಜಿ ಟಿ ಟಿ ಸಿಯ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ 20 ಎಕರೆ ಇವುಗಳಿಗೆ ಜಮೀನು ನೀಡಲಾಗುತ್ತಿದೆ
ಅಂತರಾಷ್ಟ್ರೀಯ ಕ್ರೀಕೇಟ್ ಮೈದಾನಕ್ಕೆ 70 ಎಕರೆ, ನೋರ್ಟಸಿಟಿ, ಮತ್ತು ಸ್ಫೋರ್ಟಹ" 50 ಎಕರೆ. ಕಲ್ಯಾಣ ಕರ್ನಾಟಕ ಮಾನವ ಅಭಿವೃದ್ಧಿ ಮಂಡಳಿ ಕೃಷಿ, ಸಾಂಸ್ಕೃತಿಕ ಸಂಘ ಹಾಗೂ ಇಂಜಿನೀಯರ್ ಕಾಲೇಜಿಗೆ 20 ಎಕರೆ, ಅಗ್ನಿ ಶಾಮಕ ಠಾಣೆ ಹಾಗೂ ವಿಜ್ಞಾನೇಶ್ವರ ಕಾನೂನಿನ ಕಾಲೇಜಿಗೆ ತಲಾ 15 ಎಕರೆ, ಗಾಂಧಿ ಭವನಕ್ಕೆ 10 ಎಕರೆ, ಪೊಲೀಸ್ ಠಾಣೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ವಚನ ಮಂಟಪ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಗೆ ತಲಾ 5 ಎಕರೆ, ಜಿಲ್ಲಾ ಪಂಚಾಯತಿ ನಿರ್ಮಾಣಕ್ಕೆ, ಸ್ಯಾಟ್ ಲೈಟ್, ಬಸನಿಲ್ದಾಣಕ್ಕೆ, ಜಿಲ್ಲಾ 'ಪಂಚಾಯತಿ ಕಛೇರಿ ನಿರ್ಮಾಣಕ್ಕೆ ಮತ್ತು ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಹೀಗೆ ಎಲ್ಲಾ ಇಲಾಖೆಗೆ 250 ಎಕರೆಗೂ ಹೆಚ್ಚಿನ ಜಮೀನು ಕೊಡುವಂತೆ ಒತ್ತಡ ಹೇರುತ್ತಲಿದ್ದಾರೆ. ಸರಕಾರ ಇಂಥಹ ಒತ್ತಡಕ್ಕೆ ಮಣಿಯದೇ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಮತ್ತು ಸಿಂಡಿಕೇಟ್ ಸದಸ್ಯರು ಒಂದಿಂಚು ಜಾಗ ಸಹಿತ ಕೊಡಬಾರದು.
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ದಲಿತ, ಹಿಂದೂಳಿದ ಮತ್ತು ಬಡವರ, ರೈತರ ಮಕ್ಕಳಾಗಿದ್ದಾರೆ. ದಲಿತ, ಹಿಂದೂಳಿದ. ಬಡರೈತರ ಮಕ್ಕಳು ಶರಣಬಸವೇಶ್ವರ ವಿಶ್ವವಿದ್ಯಾಲಯ ಮತ್ತು ಖಾಜಾ ಬಂದೇನವಾಜ ವಿಶ್ವವಿದ್ಯಾಲಯದಲ್ಲಿ ಲಕ್ಷಾನೂಗಟ್ಟಲೇ ಹಣ ಸುರಿದು ಓದಲಿಕ್ಕೆ ಆಗುವುದಿಲ್ಲ. ದಲಿತ, ಹಿಂದೂಳಿದ, ರೈತರ ಮಕ್ಕಳ ಉನ್ನತ ಶಿಕ್ಷಣ ಪಡೆಯಲು ವಂಚಿತರನ್ನಾಗಿ ಮಾಡಲು ಸಂಚು ರೂಪಿಸುವ ಹಾಗೆ ಕಾಣುತಿದೆ.
ಸರಕಾರಕ್ಕೆ ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಿಸುವುದರಲ್ಲಿ ಉತ್ಸಾಹವಿದೆಯೇ ಹೊರತು. ಇರುವ ವಿಶ್ವವಿದ್ಯಾಲಯಗಳು ಗುಣಮಟ್ಟ ಸುಧಾರಣೆಯ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲ. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಖಾಯಂ ಸಿಬ್ಬಂದಿಯ ಕೊರತೆ ಎದುರಿಸುತ್ತಿದೆ. ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರು ಮತ್ತು ಅತಿಥಿ ಉಪನ್ಯಾಸಕರನ್ನು ನೆಚ್ಚಿಕೊಂಡು ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಕೆಲವು ವಿಶ್ವವಿದ್ಯಾಲಯಗಳಲ್ಲಿ ಕೆಲವು ವಿಭಾಗಗಳಲ್ಲಿ ಮುಖ್ಯಸ್ಥರೆ ಇಲ್ಲ. ಅತಿಥಿ ಉಪನ್ಯಾಸಕರಿಗೆ ವೇತನ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಆಗುತ್ತಿಲ್ಲ.
ವಿಶ್ವವಿದ್ಯಾಲಯಗಳಲ್ಲಿ ಸಂವಾದ ಮತ್ತು ಸಾಂಸ್ಕೃತಿಕವಾದ ವಿಚಾರ ಧಾರೆಗಳನ್ನು ರೂಪಿಸುವ ವಿಶ್ವವಿದ್ಯಾಲಯಗಳ ಪರಂಪರೆ ಇಂದು ಕಳೆದುಕೊಂಡಿವೆ. ಈಗ ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳು ಒಂದಿಲ್ಲೊಂದು ವಿವಾಧಗಳಿಂದ ಮತ್ತು ಭ್ರಷ್ಟಾಚಾರದ ಸುದ್ದಿಯಲ್ಲಿವೆ.
ಕಲಬುರಗಿಯಲ್ಲಿರುವ ಕೇಂದ್ರಿಯ ವಿಶ್ವವಿದ್ಯಾಲಯನ್ನೊಳಗೊಂಡು ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ, ಜಾತ್ಯಾತೀತ, ಸಾಮರಸ್ಯ, ಜ್ಞಾನದಾಹದ ಕೇಂದ್ರವಾಗಬೇಕಿದ್ದ ವಿಶ್ವವಿದ್ಯಾಲಯಗಳಲ್ಲಿ ಕೋಮುವಾದದ ವಿಷ ಬೀಜ ಬಿತ್ತುವ ವಿದ್ಯಾರ್ಥಿಗಳನ್ನು ಕೋಮುಗಲಭೆಗಳಿಗೆ ಪ್ರಚೋದಿಸುವ ಕೆಲಸ ನಡೆಯುತ್ತಿದೆ.
ಗುಲಬರ್ಗಾ ವಿಶ್ವವಿದ್ಯಾಲಯದ ಜಮೀನು ಸರಕಾರ ಬೇರೆ-ಬೇರೆ ಇಲಾಖೆಗಳಿಗೆ ವರ್ಗಾಯಿಸಬಾರದು. ಒಂದುವೇಳೆ ಜಮೀನು ನೀಡಿದರೆ ದೊಡ್ಡ ಪ್ರಮಾಣದ ಚಳುವಳಿ ರೂಪಿಸಬೇಕಾಗುತ್ತದೆ. ಒಂದು ವೇಳೆ ಸರಕಾರವು ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ವಿಶ್ವವಿದ್ಯಾಲಯದ ಭೂಮಿ ಕಬಳಿಸುವ ಕೆಲಸ ಕೈಬಿಡದೇಹೋದ ಪಕ್ಷದಲ್ಲಿ ಹಂತ-ಹಂತವಾದ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವದು ಎಂದು ದಲಿತ ಸಂಘರ್ಷ ಸಮಿತಿ ತಮ್ಮ ಗಮನಕ್ಕೆ ತರಲಾಗಿದೆ. ಮರಿಯಪ್ಪನಹಳ್ಳಿ ಯವರು ತಿಳಿಸಿದರು
ಇದೇ ಸಂದರ್ಭದಲ್ಲಿ ಎಮ್.ಎಮ್. ಮೇತ್ರ ಜಿಲ್ಲಾ ಸಂಚಾಲಕರು ಕಲಬುರಗಿ
ಜಯವಮಾರ ನೂಲಕರ್ ಸಂ. ಸಂಚಾಲಕರು ಕಲಬುರಗಿಸಂತೋಷ ತೆಗನೂರ ಸಂ. ಸಂಚಾಲಕರು ಕಲಬುರಗಿ
ಮರಿಯಪ್ಪ ಹಳ್ಳಿ ರಾಜ್ಯ ಸಂಘಟನಾ ಸಂಚಾಲಕರು ಬೆಂಗಳೂರು
ರಮೇಶ ಕವಡೆ ಜಿಲ್ಲಾ ಸಂಘಟನಾ ಸಂಚಾಲಕರು ಕಲಬುರಗಿ ಇದ್ದರು.

ಶ್ರೀ ಕ್ಷೇತ್ರ ಹುಲಿಗೇಮ್ಮ ದೇವಸ್ಥಾನ ಹುಂಡಿ ಎಣಿಕೆ 20 ದಿನದಲ್ಲಿ ರೂ.1.3 ಕೋಟಿ ಹಣ ಸಂಗ್ರಹ- 70 ಗ್ರಾಂ ಕಚ್ಚಾ ಬಂಗಾರ 3 ಕೆಜಿ ಬೆಳ್ಳಿ ದೇಣಿಗೆ